Experts Audit Dharwad Mango Orchards

ದಿ. 16.02.2026 ರಂದು ಮಾವಿನ ತಜ್ಞರು, ಅಧಿಕಾರಿಗಳು ಹಾಗೂ ರೈತರ ತಂಡ ಧಾರವಾಡ ಜಿಲ್ಲೆಯ ಗ್ರಾಮಗಳಿಗೆ ತೆರಳಿ ಮಾವಿನ ತೋಟಗಳ ಅಧ್ಯಯನ ನಡೆಸಿತು. ಮುಖ್ಯವಾಗಿ- ಪ್ರಸ್ತುತ ಸಾಲಿನಲ್ಲಿ ಭಾರಿ ಪ್ರಮಾಣದಲ್ಲಿ ಬಿಟ್ಟ ಹೂ, ಹೂ ಉದುರುವಿಕೆ, ಕಡಿಮೆ ಪ್ರಮಾಣದ ಕಾಯಿ ಕಚ್ಚುವಿಕೆ, ಜಿಗಿ (ಹಾಪರ್), ಬೂದು ರೋಗ ( ಪೌಡರಿ ಮಿಲ್ಡ್ಯೂ) ಹಾಗೂ ಬ್ಲೈಟ್ ಪೀಡೆಗಳ ಬಗ್ಗೆ ಮಾವು ಬೆಳೆಗಾರರೊಂದಿಗೆ ಚರ್ಚಿಸಲಾಯಿತು. ತಂಡವು ಶೀಘ್ರವೇ ವರದಿಯನ್ನು ಜಿಲ್ಲಾಡಳಿತಕ್ಕೆ ಸಲ್ಲಿಸುವುದು. ಇಂತಹ ಪ್ರಯತ್ನ ಜಿಲ್ಲೆ ಯಲ್ಲಿ ಈ ಹಿಂದೆ ಬಹುತೇಕ ನಡೆದಿರಲಿಲ್ಲ. ಈ ಕುರಿತು ಇನ್ನೂ ಆಳವಾದ ವಿಸ್ತ್ರತ ವೈಜ್ಞಾನಿಕ ಸಂಶೋಧನೆ ಅವಶ್ಯಕತೆ ಇದೆ.ಇದು ಪ್ರಾರಂಭ. ಯಾವುದೋ ಉಹಾಪೋಹಗಳಿಗಿಂತ ವೈಜ್ಞಾನಿಕ ವರದಿಗಳಿಂದ ಮಾವು ಬೆಳೆಗಾರರ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳುವುದು ಉತ್ತಮ.

Scroll to Top