ದಿ. 18.02.2026 ರಂದು ಮಾವು ಬೆಳೆಗಾರರ ಬಳಗದ (ಎಂಬಿಬಿ) ವತಿಯಿಂದ ವಿದೇಶಗಳಿಗೆ ಮಾವನ್ನು ರಫ್ತು ಮಾಡಲು ಅವಶ್ಯಕವಾದ ಗ್ಯಾಪ್ (GAP) (ಜಾಗತಿಕ ಉತ್ತಮ ಕೃಷಿ ಪದ್ಧತಿ) ಸರ್ಟಿಫಿಕೇಟ್ ಪಡೆಯುವ ಕುರಿತು ಮಹತ್ವದ ಆನ್ ಲೈನ್ ಸಭೆ ನಡೆಸಲಾಯಿತು.
1. ವಿದೇಶಗಳಿಗೆ ಮಾವನ್ನು ಕಳಿಸಲು ಗ್ಯಾಪ್ ಅತ್ಯಂತ ಅವಶ್ಯಕವಾಗಿದೆ. ಅದರಿಂದ ಹೆಚ್ಚಿನ ಲಾಭಕ್ಕಾಗಿ ವಿದೇಶಗಳಿಗೆ ಹಣ್ಣನ್ನು ಕಳಿಸಬಹುದು.
2. ನಮ್ಮ ಬಳಗ ಮತ್ತು ಬಳಗದ ಸದಸ್ಯ(ಗ್ಯಾಪ್ ಆಸಕ್ತ) ರಿಗೆ ಅನುವಾಗುವಂತೆ ಸರ್ಟಿಫಿಕೇಟ್ ನೀಡಲಾಗುವುದು.
3. ವ್ಯಯಕ್ತಿಕವಾಗಿ ಮಾಡಿಸಲು ಹೋದರೆ ಗುಂಪು ವೆಚ್ಚಕ್ಕಿಂತ ಭಾರಿ ದುಬಾರಿಯಾಗುತ್ತದೆ.
4. ನಾವೀಗ ಬಳಗದ ಪರವಾಗಿ ಗ್ಯಾಪ್ ಸರ್ಟಿಫಿಕೇಟಿನ ಪಡೆಯಲು ಇಚ್ಛಿಸಿದ್ದು ಇದು ಬಳಗದ ಸದಸ್ಯರಿಗೆ ಅನುಕೂಲವಾಗಲಿದೆ. ಗ್ಯಾಪ್ ಸರ್ಟಿಫಿಕೇಟಿನ ಪಡೆಯಲು ಇಚ್ಛೆ ಉಳ್ಳವರು ತಮ್ಮ ಸಹಮತಿಯನ್ನು ನೀಡಬೇಕಾಗುತ್ತದೆ ಮತ್ತು ಅದಕ್ಕೆ ಸಂಬಂಧಿತ ಫೀ ತುಂಬಬೇಕಾಗುತ್ತದೆ.(ಫೀ ಮೊತ್ತವನ್ನು ನಂತರ ತಿಳಿಸಲಾಗುವುದು).
5. ಮುಂಬರುವ ದಿನಗಳಲ್ಲಿ ಮಾವಿನ ಉತ್ತಮ ಮಾರಾಟಕ್ಕಾಗಿ ನಮಗೆ ಗ್ಯಾಪ್ ಅವಶ್ಯಕವಾಗಿದೆ.
ಸದಸ್ಯರು ತಮ್ಮ ಸಹಮತಿಯನ್ನು ತಿಳಿಸಲು ಇದು ಪ್ರಾಥಮಿಕ ಸಂದೇಶ. ಈ ಕುರಿತು ಅಧಿಕೃತವಾಗಿ ಸೂಚನೆಯನ್ನು ಹೊರಡಿಸಲಾಗುವುದು.





