Visit to Innova Agri Bio Tech Park, Malur

ದಿ. 3.02.2026 ರಂದು ಮಾಲೂರಿನ ಇನೋವಾ ಅಗ್ರಿ ಬಯೋ ಟೆಕ್ ಪಾರ್ಕನ ಪ್ಯಾಕ್ ಹೌಸ್ (ಬೆಂಗಳೂರಿನ ಹತ್ತಿರ)ಗೆ ಧಾರವಾಡದ ಮಾವು ಬೆಳೆಗಾರರ ಬಳಗ ತಂಡವು ಭೇಟಿ ನೀಡಿ ಅಧ್ಯಯನ ನಡೆಸಲಾಯಿತು.

1. ಮಾವು ಬೆಳೆಗಾರರ ಬಳಗದಿಂದ ವಿದೇಶಗಳಿಗೆ ಧಾರವಾಡದ ಮಾವನ್ನು ರಫ್ತು ಮಾಡಲು ಅನುಕೂಲವಾಗಲು ಸದರಿ ಪ್ಯಾಕ್ ಹೌಸನ್ನು ಬಳಸಿಕೊಳ್ಳುವುದರ ಬಗ್ಗೆ ಮತ್ತು ಅವರ ಮೂಲಕ ರಫ್ತು ಮಾಡುವ ಕುರಿತು ಸುಧೀರ್ಘವಾಗಿ ಚರ್ಚಿಸಲಾಯಿತು.
2. ಅತ್ಯಾಧುನಿಕ ಗಾಮಾ ರೇಡಿಯೇಶನ್ ಒಳಗೊಂಡು ವಿವಿಧ ಯಂತ್ರೋಪಕರಣಗಳನ್ನು ವೀಕ್ಷಿಸಲಾಯಿತು.
2. ಧಾರವಾಡದ ಮಾವು ಅಭಿವೃದ್ಧಿ ಕೇಂದ್ರದಲ್ಲಿ ಪ್ರಾರಂಭಿಸಲಾದ ಪ್ಯಾಕ್ ಹೌಸನಲ್ಲಿ ಯಾವೆಲ್ಲ ಯಂತ್ರೋಪಕರಣಗಳಿರಬೇಕೆಂದು ಚರ್ಚಿಸಲಾಯಿತು.
3. ತಂಡದಲ್ಲಿ ಶ್ರೀ ಸುಭಾಸ ಆಕಳವಾಡಿ, ಡಾ. ರಾಜೇಂದ್ರ ಪೋದ್ದಾರ, ಶ್ರೀ ಪ್ರಮೋದ ಗಾಂವಕರ, ಸಂಗಮೇಶ ದೊಡ್ಡಮನಿ, ಭರತೇಶ ಮುಕರೆ, ಸಂತೋಷ ಸಪ್ಪಂಡಿ, ಸಮಾಲೋಚಕರಾದ ವಿಕ್ರಮ ಸಿಂಗ್ ಭಾಗಿಯಾಗಿಯಾಗಿದ್ದರು.
4. ಇನೋವಾ ಕಂಪನಿಯ ಡಾ. ರವಿ, ಮತ್ತು ಡಾ. ಪ್ರೇಮ್ ಸೋನಿ ಮತ್ತಿತರರು ಮಾರ್ಗದರ್ಶನ ನೀಡಿದರು.
5. ಅಧ್ಯಯನ ಪ್ರವಾಸವು ಫಲಪ್ರದವಾಗಲು ವಿವಿಧ ರೀತಿಯಲ್ಲಿ ಸಹಾಯ ಸಹಕಾರ ನೀಡಿದ- ಸ್ವ ಇಚ್ಛೆಯಿಂದ ತಂಡಕ್ಕೆ ವಾಹನ ವ್ಯವಸ್ಥೆ ಮಾಡಿದ ಹಸನ್ಮುಖಿ ಭರತೇಶ, ಪ್ರವೀಣ ಗಾಂವಕರ ಮತ್ತು ಅಪೇಡಾದ ಶ್ರೀಮತಿ ಮಧುಮತಿ ಮೇಡಂ, ವಸತಿ ಸೌಕರ್ಯ ಒದಗಿಸಿದ ಜಿಕೆವಿಕೆ ಕೃಷಿ ವಿಶ್ವ ವಿದ್ಯಾಲಯದ ಡಾ. ರಾಜಶೇಖರ ಮತ್ತು ಇತರರಿಗೆ ಬಳಗದ ವತಿಯಿಂದ ಅನಂತ ಧನ್ಯವಾದಗಳು.

Scroll to Top